ಇದು "ಹೋಯ್ಸಳ ಕರ್ನಾಟಕ ಬ್ರಾಹ್ಮಣ" ಸಮುದಾಯ. ಈ ಸಮುದಾಯದ ಹೆಗ್ಗುರುತು ಅದರ ಹೆಸರೇ ಆಗಿದೆ. ಈ ಹೆಸರಿನ ಮೊದಲನೆಯ ಪದ "ಹೋಯ್ಸಳ”. ಎಷ್ಟು ಜನರಿಗೆ ಈ ಪದದ ಪರಿಚಯ ಇದೆ ಅಂದರೆ, ಅದು ಹಾಸ್ಯಸ್ಪದವಾದ ಪ್ರಶ್ನೆ ಆಗುತ್ತದೆ. ಆದರೆ ಎಷ್ಟು ಜನರಿಗೆ ಈ ಪದದ ಆರ್ಥ ಗೊತ್ತಿದೆ, ಎಂದರೆ ಅದು ಸ್ವಲ್ಪ ಗಲಿಬಿಲಿಯ ಪ್ರಶ್ನೆ ಅನಿಸುತ್ಥದೆ.
ಹೊಯ್ಸಳ ಪದದ ಅರ್ಥ ಏನು? ಅದೇನು ಮಹಾ, ಅದು ಈ ನಾಡನ್ನು ಆಳಿದ "ಹೋಯ್ಸಳ" ವಂಶದ ಹೆಸರು. ಇದು ಎಲ್ಲರಿಂದ ಸಾಮನ್ಯವಾಗಿ ಬರುವ ಪ್ರತಿಕ್ರಿಯೆ. ಆದು ಸರಿ. ಪ್ರಶ್ನೆ ಮತ್ತೊಮ್ಮೆ ಓದಿ. ಪ್ರಶ್ನೆ "ಹೋಯ್ಸಳ" ಪದದ ಅರ್ಥ ಏನು ಎಂದು. ಅದೇನು ಮಹಾ, ಹೋಯ್ಸಳರ ಇತಿಹಾಸದ ಪಾಠ ಓದಿಲ್ಲವೆ? ಸರಿ ಓದಿದ್ದೀವಿ. ಏನಿದೆ ಆದರಲ್ಲಿ? ಒಮ್ಮೆ ಜ್ನಾಪಿಸಿಕೊಳ್ಳಿ
ದಂತಕತೆಯ ಪ್ರಕಾರ ಜೈನ ಗುರು ಸುದತ್ತಚಾರ್ಯನು ಸೊಸೆಯೂರಿನ ವಾಸಂತಿಕಾ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಜ್ನಾಪಿಸಿದನು. ಇದೆ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ.
ಇಲ್ಲಿ "ದಂತಕತೆಯ ಪ್ರಕಾರ" ಎನ್ನುವುದನ್ನು ಗಮನಿಸಿ. ಇದು ದಂತ ಕಥೆಯಾ? ಇದು ಸೃಷ್ಟಿಯದದ್ದು ಎಲ್ಲಿಂದ?
೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ. ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು.
ಈ ಅನುಮಾನ ಯಾಕೆ? ಯಾಕೆಂದರೆ, ಹೊಯ್ಸಳ ಶಿಲ್ಪಗಳಲ್ಲಿ ಇರುವ ವ್ಯತ್ಯಾಸ (ಇದಕ್ಕೆ ಬೇಕಾದ ಚಿತ್ರಗಳನ್ನು ಈ ಬರಹದೋಂದಿಗೆ ಕೆಳಗೆ ನೀಡಲಾಗಿದೆ)
೧) ಮೊದಲನೆಯದು, ಹೋಯ್ಸಳರ ಲಾಂಛನದಲ್ಲಿರುವುದು ಹುಲಿಯೋ ಅಥವಾ ಸಿಂಹವೋ ಎಂಬ ಸಂದೇಹ. ಕಥೆಯಲ್ಲಿ ಬರುವುದು (೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ) ಹುಲಿ. ಆದರೆ, ಬೇಲೂರಿನ ಮಂದಿರದ ಲಾಂಛನ ಕುತ್ತಿಗೆಯ ಸುತ್ತಾ ಸಿಂಹದ ಕೇಸರ ಇರುವಂತಿದೆ. ಆದರೆ ಬಸರಾಳುವಿನ ಮಂದಿರದಲ್ಲಿರುವ ವಿಗ್ರಹ ಹುಲಿಯನ್ನು ತೋರಿಸುತ್ತದೆ. ಹುಲಿಯ ಕುತ್ತಿಗೆಯಲ್ಲಿ ರಾಜ ವೈಭೊಗದ ಒಡವೆಗಳನ್ನು ಅಲಂಕರಿಸಿದಂತೆ ಇದೆ. ಆದ್ದರಿಂದ, ಹೋಯ್ಸಳ ಲಾಂಚನದಲ್ಲಿ ಇರುವುದು ಹುಲಿಯೇ ಎನ್ನುವುದು ವಾದ. ಅದು ಬಹುಶಹ ಅಲಂಕರಿಸಿರುವ ಹುಲಿ ಬರೀ ಹುಲಿಯಲ್ಲದೆ, ಅದು ಒಂದು ರಾಜ ಪ್ರಭುತ್ವವನ್ನು ಪ್ರತಿನಿಧಿಸುತ್ತದೆ.
೨) ಬೇಲೂರಿನ ಮಂದಿರದ ಲಾಂಛನದಲ್ಲಿ ಸಳ ಬರೀ ಕತ್ತಿ ಅಥವಾ ಚೂರಿ ಹಿದಿದಂತೆ ಇದೆ. ಆದರೆ ಬಸರಾಳಿನ ವಿಗ್ರಹದಲ್ಲಿ ಸಳನ ಕೈಯಲ್ಲಿ ಗುರಾಣಿ ಇದೆ. ಗುರಾಣಿ ಇರುವುದರಿಂದ, ಸಳ ಯುದ್ದಕ್ಕೆ ಸನ್ನದ್ದನಾಗಿ ಬಂದಿರುವಂತೆ ತೋರುತ್ತದೆ. ದಂತಕತೆಯಲ್ಲಿರುವಂತೆ, ವಿದ್ಯಾಭ್ಯಾಸ ಮಾಡುತ್ತಿರುವಾಗ ನಡೆದ ಆಕಸ್ಮಿಕ ಘಟನೆ ಅದು ಅಲ್ಲ ಎಂದು ತಿಳಿದುಬರುತ್ತದೆ.
೩) ಹೋಯ್ಸಳ ದೋರೆ ವಿನಯಾದಿತ್ಯನ ಕಾಲದ್ದೆಂದು ತಿಳಿದುಬರುವ, ಚಿನ್ನದ ನಾಣ್ಯದಲ್ಲಿ ಹುಲಿಯ ಬದಲಿಗೆ ಶಾರ್ದೊಲ ಇರುವಂತೆ ತೋರುತ್ತದೆ. ಶಾರ್ದೋಲ ಹುಲಿಗಿಂತ ಶಕ್ತಿಯುತವಾದ ಪ್ರಾಣಿ ಎನ್ನುವುದು ದಂತಕತೆ. ಈ ಶಾರ್ದೂಲ ಕೆಳಭಾಗದಲ್ಲಿ ಇದ್ದು, ಅದನ್ನು ಒಂದು ಗಂಡಭೇರುಂಡ ಪಕ್ಷಿಯು ಮೆಟ್ಟಿ ನಿಂತತೆ ಇದೆ. ಶಾರ್ದೂಲ ಶಿವನನ್ನು ಮತ್ತು ಗಂಡಭೇರುಂಡವು ವಿಷ್ಣುವನ್ನು ಪ್ರತಿನಿಧಿಸುತ್ತವೆ ಎನ್ನುವುದು ಪುರಾಣದ ಮೂಲಕ ತಿಳಿಯುತ್ತದೆ. ಇದು ಸಾಂಧರ್ಭಿಕವಾಗಿ ಶೈವಾರಾಧಕರಾದ ಚೋಳರನ್ನೂ(ಶಾರ್ದೂಲ) , ಶ್ರೀ ವೈಶ್ಣವರಾದ ಹೋಯ್ಸಳರನ್ನೂ (ಗಂಢಭೇರುಂಢ) ಪ್ರತಿನಿಧಿಸುತ್ತದೆ. ಅಲ್ಲದೆ, ಚೋಳರ ಮೇಲಿನ ಹೋಯ್ಸಳರ ವಿಜಯವನ್ನೂ ಪ್ರಮಾಣೀಕರಿಸುತ್ತದೆ. ಗಂಢಭೇರುಂಢ, ಹೋಯ್ಸಳರಿಂದ ವಿಜಯನಗರಕ್ಕೂ, ಮೈಸೂರು ಅರಸರಿಗೂ ಹೋಗಿ, ಈಗ ಕರ್ನಾಟಕ ಸರ್ಕಾರದ ಮೋಹರಿನಲ್ಲಿದೆ.
೪) ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶವನ್ನು ಪ್ರಾಮುಖವಾಗಿ ಗಮನಿಸಬೇಕು. ಇದನ್ನು ಚೊಳರ ಕಾಲದ ಚಿನ್ನದ ನಾಣ್ಯಗಳಿಂದ ಸಾಧಿಸಲಾಗಿದೆ.
೫) ಹೋಯ್ಸಳರ ಉತ್ತುಂಗ, ವಿಶ್ಣುವರ್ಧನನ ಕಾಲದಲ್ಲಿ ಆಯಿತು. ಆದರೆ ವಿಶ್ಣುವರ್ಧನನ ಕಾಲದ ಚಿನ್ನದ ನಾಣ್ಯಗಳಲ್ಲಿ ಹುಲಿಯ ಗುರುತು ಇಲ್ಲದಿರುವುದು.
೬) ಸಳ, ವಂಶದ ಆದಿ ಪುರುಶನಾಗಿದ್ದರೆ ಅಥವಾ ಆತನಿಂದ ರಾಜ್ಯ ಸ್ತಾಪಿತವಾಗಿದ್ದರೆ, ಆತನ ಹೆಸರು ಶಾಸನಗಳಲ್ಲಿ ಉಲ್ಲೇಖವಾಗುತ್ತಿತ್ತು (ಇಕ್ಶ್ವಕು ವಂಶ, ಕದಂಬರ ಮಯೂರಶರ್ಮ ಇವರಂತೆ). ಆದರೆ ಸಳನ ಹೆಸರು ದಂತಕತೆಯನ್ನು ಬಿಟ್ಟು, ಬೇರೆಲ್ಲೋ ಪ್ರಸ್ಥಾಪ ಆಗಿಲ್ಲ.
ಈ ಎಲ್ಲಾ ಕಾರಣಗಳಿಂದ, "ಹೋಯ್ - ಸಳ”, ಹೋಯ್ಸಳ ಪದದ ಮೊಲ ಅಲ್ಲವೆನ್ನ ಬಹುದು. ಸಳನ ಕಥೆ, ದಂತಕಥೆ ಅನ್ನುವುದು ನಿಜದಂತೆ ತೋರುತ್ತದೆ.
ಆಂದರೆ, ಹೋಯ್ಸಳ ಪದದ ಆರ್ಥವೇನು?
ಸ್ವಲ್ಪ ಯೋಚಿಸಿ ನೋಡಿ. ನಿಮಗೆ ತಿಳಿಯುತ್ತದೆ. ಹೊಯ್ಸಳರು, ಚಾಳುಕ್ಯರ ಮತ್ತು ರಾಷ್ತ್ರಕೂಟ ದೋರೆಗಳ ಸಾಮಂತ ರಾಜರಾಗಿದ್ದವರು. ಅದಕ್ಕೆ ಹೋಲಿಸಿದರೆ, ಚೋಳರು ಬಹಳ ಪ್ರಭಾವಶಾಲಿ ದೋರೆಗಳು. ಚೋಳರನ್ನು ಸೋಲಿಸಿದ ಸಾಧನೆ, ಹೋಯ್ಸಳರನ್ನು ಸಾಮಂತ ಪದವಿಯಿಂದ ಸ್ವಾತಂತ್ರ್ಯ ರಾಜ್ಯ ಕಟ್ತುವ ವರೆಗೆ ಕೊಂಡೋಯ್ದಿತು. ಚೋಳರಿಗೆ ಸೋಲುಣಿಸಿದ ಸರದಾರನಿಗೆ, ಜನಸಾಮನ್ಯರು ಏನಂತಾ ಕರೆದಾರು?
"ಪೋಯ್ - ಚೋಳ". “ಪೋ" ಅನ್ನುವುದು ಕನ್ನಡದ ಪದ. "ಪೋಗಾದಿರೆಲೋ ರಂಗಾ....” ಕೇಳ್ಳಿದ್ದೀರಲ್ಲ? ಪೋ ಅನ್ನುವುದನ್ನು ಹೋಗು, ಕಳಿಸು, ಓಡಿಸು ಅನ್ನುವ ಆರ್ಥದಲ್ಲಿ ಬಳಸಲಾಗುತ್ತದೆ. "ಪೋಯ್ - ಚೋಳ" ಅಂದರೆ, ಚೋಳರನ್ನು ಓಡಿಸಿದವ ಎಂದರ್ಥ. ಆಡುಭಾಷೆಯಲ್ಲಿ, "ಪೋಯ್ - ಚೋಳ", “ಪೋಯ್ಚಳ" ಆಗುತ್ತದೆ. “ಪೋಯ್ಚಳ" “ಹೊಯ್ಸಳ" ಆಗಿದೆ.
ಇದೆಲ್ಲಾ, ಗೋತ್ತಿದ್ದಮೇಲೆ, ಸಳನ ದಂತಕತೆಯನ್ನು ಯಾಕೆ ನಮಗೆ ಇತಿಹಾಸ ಎಂದು ಈಗಲೂ ಬೋದಿಸುತ್ತಾರೆ? ಬಹುಶಹ, ಬ್ರಿಟಿಷರು ಅಧೀನದಲ್ಲಿದ್ದ ತಮಿಳು ಭಾಷಿಕರಾಗಿದ್ದ ಇತಿಹಾಸಕರರ ಪ್ರಭಾವ ಇರಬಹುದು (ಚೋಳರ ಲಾಂಚನದಲ್ಲಿ ಚಾಲುಕ್ಯರ ವರಾಹ ಇದೆ. ಇದನ್ನು ಈ ಇತಿಹಾಸಕಾರರು ಚೋಳರ ಪರಾಕ್ರಮ ಮೆರಸಲು ಬಳಸುತ್ತಾರೆ. ಆದರೆ ಅದೇ ರೀತಿ ಇರುವ ಹೋಯ್ಸಳರ ಲಾಂಚನದಲ್ಲಿ ಜಾಣ ಕುರುಡು ಪ್ರದರ್ಷಿಸಲಾಗುತ್ತದೆ). ಚೋಳರು ತಮಿಳಿಗರ ಹೆಮ್ಮೆ. ಆ ಹೆಮ್ಮೆಗೆ ಸಂಚಕಾರ ತಂದ ಹೋಯ್ಸಳರ ನಿಜವಾದ ಅರ್ಥ ವ್ಯಾಖ್ಯಾನ ಮಾಡುವುದು, ಅವರಿಗೆ ಮುಜುಗರದ ವಿಷಯವಾಗಿರಬಹುದು. ಆದ್ಧರಿಂದ, ಸಂಶೋದನೆಯ ನಿಜವನ್ನು ಮರೆಮಾಚಿ, ದಂತಕತೆಯನ್ನು ನಂಬಿಸಿ, ಕನ್ನಡಿಗರಿಗೆ ದ್ರೊಹಮಾಡಲಾಗಿದೆ.
"ಹೋಯ್ಸಳ" ಪದ ಮತ್ತು "ಹೋಯ್ಸಳರ ಲಾಂಛನ” , ನಿಜವನ್ನು ಸಾರಿ ಸಾರಿ ಹೇಳುತ್ತಿದೆ. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ? ಯಾವುದೋ ವಿದೇಷೀಯನ ಪುಸ್ಥಕ ತೋರಿಸಿ ಭಂಡ ವಾದ ಮಾಡುವವರನ್ನು ಜನತೆ ತಿರಸ್ಕರಿಸಬೇಕು. ಇನ್ನಾದರೊ ಕನ್ನಡಿಗರು ಎಚ್ಚೆತ್ತು ಕೋಳ್ಳಬೇಕಿದಿ. ದಂತಕತೆಯನ್ನು ನಂಬಿಸಿ ಮತ್ತೆ ಮತ್ತೆ ಹೇಳುವುದು ದ್ರೋಹ ಬಗೆದಂತೆ. ಹೋಯ್ಸಳರ ಮನ್ನಣೆಯನ್ನು ಕಸಿದಂತೆ. ತಮಿಳು-ಕನ್ನಡ ಸಾಮರಸ್ಯ ಹಾಳಾಗುವ ಗುಮ್ಮ ಮುಂದಿಟ್ಟು, ನಿಜ ಮರೆಮಾಚುವ ಕಾರ್ಯಕ್ಕೆ ಇತಿಶ್ರೀ ಬರೆಯಬೇಕಿದೆ. "ಸತ್ಯಂ ಶಿವಂ ಸುಂದರಮ್" ಎಂಬ ವಾಖ್ಯ ನಂಬಿದ ಸಂಸ್ಕತಿ ನಮ್ಮದು. ಸತ್ಯವಾದದ್ದನ್ನು ಸಾಧಿಸಿ ತೋರಿಸಬೇಕು. ಹೋಯ್ಸಳ ಪದದಲ್ಲಿ, ನಮ್ಮ ಸಮುದಾಯದ ಹೆಮ್ಮೆ ಅಡಗಿದೆ. ಅದು ಬರೀ ನಮ್ಮ ಸಮುದಯದ ಹೆಮ್ಮೆ ಮಾತ್ರ ಅಲ್ಲ. ಅದು ಇಡೀ ಕನ್ನಡ ನಾಡಿನ ಹೆಮ್ಮೆ. ಈ ಹೆಮ್ಮೆ ಮತ್ತು ಮನ್ನಣೆ ಯನ್ನು ಮತ್ತೆ ಪಡೆಯಬೇಕಿದೆ. ಕಷ್ಟಪಟ್ಟು ನಾಡು ಕಟ್ಟಿ ಆಳಿದ ಹೋಯ್ಸಳ ಸಾಮ್ರಾಜ್ಯಕ್ಕೆ ದೋರೆಯಬೇಕಾದ ಮನ್ನಣೆ ದೊರಕಿಸಬೇಕಾಗಿದೆ.
ಕನ್ನಡವನ್ನು ಆಡಿದಂತೆಯೇ ಬರೆಯುವುದು ವಾಡಿಕೆ. ಮತ್ತು ಬರೆದಂತೆಯೇ ಓದಲೂ ಬಹುದು. ಇದನ್ನು ಊಪಯೋಗಿಸಿ, ಚೋಳರ ಹೆಸರನ್ನೂ ಬಹುಶಹ ಸಂಶೋದಿಸಬಹುದು. ಇತಿಹಾಸಕಾರರ ಪ್ರಕಾರ ಚೋಳ ಶಬ್ದಕ್ಕೆ ಅರ್ಥ ಸಿಕ್ಕಿಲ್ಲ (http://www.cs.mcgill.ca/~rwest/wikispeedia/wpcd/wp/c/Chola_dynasty.htm).
ತಮಿಳಿನಲ್ಲಿ, “ಲ" ಮತ್ತು 'ಳ" ಹಾಗೂ 'ಚ' ಮತ್ತು "ಛ' ಎರಡನ್ನೊ, ಒಂದೇ ರೀತಿ ಪರಿಗಣಿಸಲಾಗುತ್ತದೆ. ಚೋಳ ಬಹುಷಹ, "ಛಲ" ಇರಬೇಕು. ಕನ್ನಡದಲ್ಲಿ ಛಲ ಅಂದರೆ, ಹಠ ಎಂದರ್ಥ. ಛಲಕ್ಕೆ ಬಿದ್ದು ರಾಜ್ಯ ಕಟ್ಟಿರಬಹುದಾದ್ದರಿಂದ, ಅವರು "ಛಲರು". ನಿವು ಪರಿಶಿಷ್ತರಾಗಿರುವ 'ಛಲವಾದಿ' ಸಮುದಾಯದ ಹೆಸರು ಕೇಳಿರಬೇಕು.
ಚೋಳರನ್ನು ಓಡಿಸಿದವರನ್ನು ಕನ್ನಡದವರು 'ಪೊಯ್ - ಛಲ' ಎಂದು ಗುರುತಿಸಿರಬೇಕು. "ಪೊಯ್ - ಛಲ" ಅಡುಮಾತಿನಲ್ಲಿ “ಪೊಯ್ಛಲ" ಆಗುತ್ತದೆ. ಇದರ ಬಗ್ಗೆ ಭಾಷಾಕಾರರು, ಇತಿಹಾಸಕರರು ಸಂಶೋದನೆ ನಡೆಸಿದರೆ ನಿಜ ಅರಿವಾಗಬಹುದು.