Wednesday, 17 January 2018

summne ondu alochane...



ಸುಮ್ಮನೆ ಹೀಗೆ....

ಮೋದಿಯವರು....ಭಾಯಿಯೋ ಔರ್ ಬಹೆನೋ ಅಂದು, ಬ್ಯಾಂಕುಗಳನ್ನ ರಾಷ್ಟರೀಕರಿಸಿದ ಹಾಗೆ, ಭೂ ಒಡೆತನ ರಾಷ್ಟರೀಕರಿಸಿದರೆ (ಚೈನಾದಂತೆ, ಭೂ ಒಡೆತನದ ಬದಲಿಗೆ, ನೂರು ವರ್ಷದ ಅವಧಿಗೆ ಬಾಡಿಗೆ ಅಂತ ಕಾನೂನಿನ ಬದಲಾವಣೆ ಮಾಡಿ) ರಾಜ್ಯ ಸರ್ಕಾರಕ್ಕೆ ಅಗಾಧ ಬೆಲೆಯ ಭೂ ಸಂಪತ್ತು ಸಿಗುತ್ತದೆ. ಸರ್ಕಾರ (ರಾಜ್ಯ ಸರ್ಕಾರ) ಭೂ ಒಡೆತನದ ಹಕ್ಕನ್ನು ಬ್ಯಾಂಕ್ಗಳಲ್ಲಿ ಒತ್ತೆ ಇಟ್ಟರೆ, ತತ್ ಕ್ಷಣ, ಬೇಕಾಗಿರುವಷ್ಟು ಅಗಾಧ ಪ್ರಮಾಣದ ಹೂಡಿಕೆ ಹಣ ಸಾಲದ ರೂಪದಲ್ಲಿ ಸಿಕ್ಕುತ್ತದೆ (ಬ್ಯಾಂಕುಗಳು ಇದನ್ನ ಮಾಡಬಹುದು)
ಈ ಹಣವನ್ನ ಕೈಗಾರಿಕೆಗಳನ್ನು ಸ್ಥಾಪಿಸಲು ಬಳಸಿ, ಅದರ ಶೇರುಗಳನ್ನು‌ (20 ವರ್ಷಗಳಿಗೆ ನಿಯಮಿತಗೊಳಿಸಿ) ಅದೇ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಯುವಕರಿಗೆ ಪರಭಾರೆ ಮಾಡಿದರೆ, ಭಾರತದ ಎಲ್ಲರೂ ಶ್ರೀಮಂತರಾದಂತೆ. ಯುವಕರು ಬಂದ ಶೇರಿನ ಹಣಕ್ಕೆ ಅನುಗುಣವಾಗಿ, ಬ್ಯಾಂಕಿಗೆ ನಿಯಮಿತವಾಗಿ ಬಡ್ಡಿ‌ ಕಟ್ಟ ಬೇಕು. ಶೇರು ಬಂಡವಾಳದ ಅಸಲು 20 ವರ್ಷಗಳ‌ ಒಳಗೆ ಹಿಂದಿರುಗಿಸಬೇಕು. ಅಸಲು+ಬಡ್ಡಿ ತೀರಿಸದ ನಂತರ, ಶೇರಿನ ಸಂಪೂರ್ಣ ಹಕ್ಕು ಸೌಮ್ಯ ಯುವಕರ ಪಾಲಾಗುತ್ತದೆ. ಕೆಲಸ ಮಾಡುವ ಯುವಕರು ಕೈಗಾರಿಕೆಯ ಮಾಲೀಕರಾಗುವುದರಿಂದ , ಕೈಗಾರಿಕೆ ಲಾಭ ಮಾಡಿ ಶೇರು ಬಂಡವಾಳ ಅಭಿವೃದ್ದಿಗೊಳಿಸುವುದು ಅವರದೇ ಹೊಣೆಗಾರಿಕೆ ಆಗುತ್ತದೆ. ಬಡ್ಡಿ ಕಟ್ಟದ ಯುವಕ ಕೆಲಸ ಕಳೆದು ಕೊಳ್ಳುವುದಲ್ಲದೆ, ಆತನ ಶೇರನ್ನು ಇನ್ನೂಬ್ಬ (ದುಡಿದು ಬಡ್ಡಿ ಕಟ್ಟಲು ಸಾಧ್ಯ ಇರುವ) ಯುವಕನಿಗೆ ಕೊಡಬೇಕಾಗುತ್ತದೆ. ಇದು ಸರ್ಕಾರಕ್ಕೆ ಹಾಗೂ ಬ್ಯಾಂಕಿಗೆ ಕೊಟ್ಟ ಸಾಲಕ್ಕೆ ಬೇಕಾದ ಭದ್ರತೆಗೆ ಸಾಕು.‌ ಭದ್ರತೆಯೊಂದಿಗೆ ಕೊಡುವ ಸಾಲದ ಬಡ್ಡಿ ಕಡಿಮೆ ಇಟ್ಟರೂ, ಸಾಲದ ಪ್ರಮಾಣ ಅಧಿಕ ವಾಗಿರುವುದರಿಂದ, ಸಾಲ ಕೊಟ್ಟ ಬ್ಯಾಂಕ್ಗೆ ಅತ್ಯಧಿಕ ಲಾಭ ಬರುತ್ತದೆ. ಹೀಗೆ, ಸರ್ಕಾರ, ಬ್ಯಾಂಕ್ ಹಾಗೂ ಎಲ್ಲರಿಗೂ ಅನುಕೂಲ ಆಗುತ್ತದೆ.

ಉಳುವವನಿಗೇ ಭೂಮಿ ಎಂದು, ಒಮ್ಮೆ ಸರ್ಕಾರ ಭೂಮಿ ಕಸಿದ ಉದಾಹರಣೆ ಇದೆ. ಭೂಮಿಯ ಒಡೆತನ ಹೊಗುತ್ತದೆಯೇ ವಿನಃ, ತಕ್ಷಣ ಭೂಮಿ ಯಾರ ಕೈ ಇಂದಲೂ ಹೋಗುವುದಿಲ್ಲ (100 ವರ್ಷದ ತನಕ. ಆ ನಂತರ ಇನ್ನೂ ಭೂಮಿ ಬೇಕಾದರೆ, ಪರಿಶೀಲಿಸಿ ಭೂಮಿಯ ಬಾಡಿಗೆ ನವೀಕರಿಸ ಬಹುದು). ಭೂಮಿಯ ಪಾರಂಪರಿಕ ಒಡೆತನದ ಬದಲು ಮಕ್ಕಳಿಗೆ ಕೈಗಾರಿಕೆಯಲ್ಲಿ ಶೇರು ಬಂಡವಾಳ, ಮಾಲೀಕತ್ವ ಹಾಗೂ ಕೆಲಸ ಸಿಗುತ್ತದೆ.
ಎಲ್ಲರಿಗೂ ಕೆಲಸ, ಎಲ್ಲರಿಗೂ ಕೈ ತುಂಬ ಸಂಪಾದನೆ ಹಾಗೂ ಕೈಗಾರಿಕಾಭಿವೃದ್ದಿ ಆಗುತ್ತದೆ. ಭೂ ಮಿಯ ದರ ಹಾಗೂ ಬಾಡಿಗೆ ಕುಸಿಯುತ್ತದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಮನೆ/ಭೂಮಿ ಸಿಗುತ್ತದೆ. ಬೇಡದ ಭೂಮಿಯನ್ನ ಯೂರೂ ಬೆಲೆ ಎರಿಸಲು ಪೇರಿಸಲಾಗುವುದಿಲ್ಲ.‌ಭೂಮಿಯ ಬೆಲೆ/ಬಾಡಿಗೆ ಹಣ ತಗ್ಗಿದರೆ, ಎಲ್ಲಾ ಸರಕಿನ ಬೆಲೆ ಕಡಿಮೆಯಾಗುತ್ತದೆ. ಭಾರತ ಕಡಿಮೆ ದರದಲ್ಲಿ ವಿಶ್ವಕ್ಕೆ ಸರಕು ತಯಾರು ಮಾಡುವ ಕೇಂದ್ರವಾಗುವುದರಿಂದ, ಕೈಗಾರಿಕೆಗಳು ಭಾರತದತ್ತ ನುಗ್ಗಿ ಬರುತ್ತವೆ. ದುಡಿಯುವ ಕೈಗಳು ಹಾಗೂ ಬಂಡವಾಳ ನಮ್ಮದೇ ಇರುವಾಗ ಪರಕೀಯರ ಬಂಡವಾಳಕ್ಕೆ ಕೈ ಒಡ್ಡುವುದೂ ತಪ್ಪುತ್ತದೆ.‌ ಖರ್ಚು ಕಡಿಮೆ, ಆದಾಯ ಜಾಸ್ತಿ ಆಗುವುದರಿಂದ, ಸಾಲ ತೀರಿಸಿ, ಎಲ್ಲರೂ ಶ್ರೀಮಂತಕೆಯ ಮೆಟ್ಟಿಲು ಏರಬಹುದು. ಯಾರ ಮುಲಾಜಿಲ್ಲದೇ ಭಾರತ, ಅಭಿವೃದ್ದಿಯ ದಾಪುಗಾಲು ಇಡಬಹುದು.


ಸರ್ಕಾರದ, ದೇವಸ್ಥಾನದ ಭೂಮಿ ನುಂಗಿ, ಭೂಮಿಯಲ್ಲೇ ಅಡಗಿಸಿಟ್ಟಿರುವ ಕಾಳಧನ....ಯುವಕರ ಪಾಲಾಗುತ್ತದೆ. ವಿಶ್ವ ಗುರುವಾಗುವ ಕನಸು ಹೊತ್ತ ಭಾರತಕ್ಕೆ ಬೇಕಾಗಿರುವುದು ಇಂತಹ "ಭಾಗ್ಯಗಳು". ಜನರನ್ನ ಇರುವ ಭೂಮಿ ಒಣಗಲು ಬಿಟ್ಟು, ದುಡಿಮೆ ಇಂದ ತಪ್ಪಿಸಿ, ಊರ ಕಟ್ಟೆಯಲ್ಲಿ ಮೊಬೈಲ್ ನೋಡುತ್ತಾ ಸೋಂಬೇರಿಯಾಗಿಸುವ "ಅನ್ನಭಾಗ್ಯ" ಬೇಕಾಗಿಲ್ಲ.


ಕಪ್ಪು ಹಣ ತಂದು ಎಲ್ಲರ ಖಾತೆಗೆ 5 ಲಕ್ಷ ಕೊಡುತ್ತಾರೆ ಅಂತ ಗುಲ್ಲೆಬ್ಬಿಸ್ಸಿದ್ದ ಪ್ರತಿಪಕ್ಷಗಳ ಮಾತಿಗೆ ಉತ್ತರವೆಂಬಂತೆ, ಈ ಯೋಜನೆ ಇಂದ, ಪ್ರತಿ ಯುವಕನಿಗೆ ಸುಮಾರು 25ಲಕ್ಷದಷ್ಟು ಶೇರಿನ ಹಣ (5 ಪಟ್ಟು ಹೆಚ್ಚಿಸಿ) ಕೊಟ್ಟು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಬಹುದು.

- ನಿವೇನೆನ್ನುತ್ತೀರಾ?

No comments:

Post a Comment