Sunday 18 December 2016

ಕನ್ನಡ ಅಂಕಿ ಸಂಖ್ಯೆಯ ಮಹತ್ವ / Story of numerals

ನವೆಂಬರ್ ಮುಗಿಯಿತು, ಕನ್ನಡಕ್ಕಾಗಿ ಏನಾದರೂ ಬರೆಯಬೇಕೆನಿಸಿತು. ಅದಕ್ಕಾಗಿ, ಈ ಲೇಖನ.

ಇಂದು ಅಂಕೆ ಸಂಖ್ಯಗಳಿಂದ ಗಣಿತ ಹಾಗೂ ಅದರಿಂದ ಬೆಳೆದ ವಿಙ್ನಾನದ ಮಹತ್ವ ಎಲ್ಲರಿಗೂ ತಿಳಿದ ವಿಷಯ. ಈ ಸಂಖ್ಯೆಗಳನ್ನು ಮೊದಲು ಪ್ರಪಂಚದಾದ್ಯಂತ ಆದಿವಾಸಿ ಆಗಿದ್ದ ಮಾನವ ಜನಾಂಗ ಗೆರೆಗಳನ್ನು ಬಳಸಿ ಬರೆಯುತ್ತಿತ್ತು. ಶೂನ್ಯ ಮತ್ತು ದಶಮಾಂಶ ಪದ್ದತಿ ಸಂಶೋಧಿಸಿದ ಮೇಲೆ ಗಣಿತ ಮತ್ತು ವಾಣಿಜ್ಯ ಬೆಳೆಯಲು ಶುರುವಾದದ್ದು. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಯುರೋಪಿಯನ್ನರ ಕುತಂತ್ರದಿಂದ ನಾವು ಇಂದು ಬಳಸುವ ಅಂಕೆಗಳಿಗೆ ಹಿಂದೂ-ಅರಾಬಿಕ್ ಅಂಕೆಗಳೆಂದು ಹೆಸರಿಸಿ, ಭಾರತಕ್ಕೆ ಸಲ್ಲಬೇಕಾದ ಸಂಪೂರ್ಣ ಗೌರವವನ್ನು ಕಡಿಮೆಮಾಡಿದ್ದಾರೆ. ಇದೂ ಗೊತ್ತಿರುವ ಸಂಗತಿ.

ಮಾನವ ಗೆರೆಗಳನ್ನು ಬರೆದು ಎಣಿಸುವ ಕ್ರಮದಿಂದ ದಶಮಾಂಶ ಪದ್ಧತಿಗೆ ಬರಲು ಏನು ಕಾರಣ ಎನ್ನುವುದನ್ನು ನಮ್ಮ ಮಾಧ್ಯಮ ಮಿತ್ರರು ಪ್ರಪಂಚಕ್ಕೆ  ತಿಳಿಸಿಲ್ಲ.ಇದಕ್ಕೆ ಸಿಗಬೇಕಾದ ಪ್ರಚಾರ ಸಿಕ್ಕಿಲ್ಲ. ಇದನ್ನು ತಿಳಿಸಲೆಂದೇ ಈ ಲೇಖನ. 

ವೇದ/ಉಪನಿಷತ್ತಿನಲ್ಲೇ ಶೂನ್ಯ (ಜೀರೋ) ಮತ್ತು ಅನಂತ (ಇನಫೈನೈಟ್) ದ ಉಲ್ಲೇಖ ಇದೆ. ( ಇಷೋಪನಿಷತ್ತಿನ, ಪೂರ್ಣಮದ ಪೂರ್ಣಮಿದಂ ಶಾಂತಿಮಂತ್ರದ  ಅರ್ಥ ವ್ಯಾಖ್ಯಾನದಲ್ಲಿ ಇದರ ವಿಚಾರ ಇದೆ). ಅಂದರೆ ಭಾರತೀಯರು ಇದನ್ನು ವೇದಗಳ ಜೊತೆ ಅನ್ವೇಷಿಸಿದ್ದರು. ಶೂನ್ಯ ಹಾಗೂ ಅನಂತದ ಕಲ್ಪನೆ ಪರಮಾತ್ಮನನ್ನು ವಿವರಿಸಲು ಹುಟ್ಟಿದ್ದು , ಸರಿ. ಆದರೆ ಇದು ಅಂಕಿಗಳಿಗೆ ಬಳಸಲು ಅಥವಾ ದಶಮಾಂಶ ಪದ್ಧತಿಗೆ ಬಳಸಲು ಸರಿಯಾದ ಕಾರಣ ಎನಿಸುವುದಿಲ್ಲ.

ವೇದಾಂಗದಲ್ಲಿ ಬರುವ ಶಾಸ್ತ್ರ ಜೋತಿಷ್ಯ. ಇದರಿಂದ ಹೊರಟ್ಟದ್ದೇ ಖಗೋಳ ವಿಙ್ನಾನ. ಇದು ನಡೆದಿದ್ದು ಭಾರತಲ್ಲಿ ಮೋದಲು, ಏಕೆಂದರೆ ಪ್ರಪಂಚದಲ್ಲಿ ಮಾನವ ಬೇಟೆಯಾಡುವ ಆದಿಮಾನವನಿಂದ, ಕೃಷಿ ಅವಲಂಬಿಸಿ  (ಸಿವಿಲೈಸ್ಡ್) ನಾಗರೀಕ ಪ್ರವೃತ್ತಿಯ "ಆರ್ಯ" ನಾದದ್ದು ಭಾರತದ ಪುಣ್ಯಭೂಮಿಯಲ್ಲಿ. ಜೋತಿಷ್ಯದ ಬಗ್ಗೆ ವಿವೇಕಿಸುತ್ತದ್ದ ಜನಕ್ಕೆ ಮೊದಲು ಕಂಡದ್ದು ಚಂದ್ರನ ಬದಲಾವಣೆ. ಅಂದರೆ ಅಮಾವಾಸ್ಯೆ ಮತ್ತು ಪೂರ್ಣಿಮೆ. ಈ ಅಮಾವಾಸ್ಯೆ ಮತ್ತು ಪೂರ್ಣಿಮೆಗಳ ಮೇಲೆ ದಿನ ಲೆಕ್ಕ ಹಾಕುವ ಬಗ್ಗೆ ಯೋಚಿಸಿದಾಗ ಸಿಕ್ಕದ್ದೆ ,ಪಂಚಾಗ ಅಥವಾ ಇಂದಿನ ಕ್ಯಾಲೆಂಡರ್. ಅಂಕೆ ಸಂಖ್ಯೆಗಳನ್ನು ಆವಿಷ್ಕರಿಸದಿದ್ದ ಕಾಲದಲ್ಲಿ ಅಮಾವಾಸ್ಯೆ ಅಥವಾ ಹುಣ್ಣಿಮೆಯನ್ನು ಜನ ಹೇಗೆ ಬರೆದಾರು? ಅಮಾವಾಸ್ಯೆ ಅಂದರೆ ಚಂದ್ರ ಇಲ್ಲದ್ದು ಅಂದರೆ ಏನೂ ನಮೂದಿಸದೇ ಇರುವುದು. ಅಥವಾ ಚಂದ್ರ ಬರೆದು, ಒಂದು ಅಡ್ಡ ರೇಖೆ ಹಾಕಿ ಚಂದ್ರನಿಲ್ಲ ಎಂದು ಸೂಚಿಸುವುದು. ಹಾಗೇ ಪೂರ್ಣಿಮೆಯ ಚಂದ್ರ "O" ಆದ. ಇವತ್ತು ಕ್ಯಾಲೆಂಡರ್ನಲ್ಲಿ ಪೂರ್ಣಮೆಯ ಚಂದ್ರನನ್ನು ಹೀಗೇ ಗುರುತಿಸುತ್ತಾರೆ. ಮೊದಲನೆಯ ದಿನ ಅಂದರೆ ಪಾಡ್ಯದ ಚಂದಿರ ೧ ಆದ. ಹೀಗೆ ವಕ್ರವಾದ ರೇಖೆಗಳಿಂದ ೧ ರಿಂದ ೧೪ ದಿನಗಳನ್ನು ಹೆಚ್ಚು ವಕ್ರರೇಖೆಗಳನ್ನು, ಒಂದರ ಮೇಲೊಂದರಂತೆ ಬರೆದು (ಚಂದ್ರ ಮೈದುಂಬುವಂತೆ) ಪೊರ್ಣಮೆಯವರೆಗೂ ಬರೆಯಲು ಹಾಗೂ ಅದೇ ರೇಖೆಗಳನ್ನು ಉಲ್ಟಾಮಾಡಿ ಅಮಾವಾಸ್ಯೆಯವರೆಗೂ ಬರೆಯುವುದು ಶುರುವಾಯಿತು. ಹೆಚ್ಚು ರೇಖೆಗಳು ಒಂದರ ಮೇಲೊಂದರಂತೆ ಬರೆಯಲು ಕಷ್ಟಕರವಾದದ್ದರಿಂದ ವಕ್ರ ರೇಖೆಗಳನ್ನು ಮಾರ್ಪಡಿಸಿ ಬರೆಯುವ ಕ್ರಮ ಆವಿಷ್ಕರಿಸಲಾಯಿತು. ಈ ರೀತಿ ಬರೆಯುವ ಕ್ರಮ ಹದಿನೈದೆಣಿಕೆ (pentadecimal system) ಎನ್ನಬಹುದು.  ಈ ಹದಿನೈದೆಣಿಕೆ ಕ್ರಮದ ಅಂಖೆ ಸಂಖ್ಯೆಗಳನ್ನು (ಅಥವಾ ಚಿಹ್ನೆಗಳನ್ನು) ಬಳಕೆಯಲ್ಲಿದ್ದ ತೂಕ ಹಾಗೂ ಇನ್ನಿತರ ಅಳತೆ ಮಾಪನವನ್ನು ಎಣಿಸಲು ಹಾಗೂ ನಮೂದಿಸಲು  ಶುರುಮಾಡಲಾಯಿತು. ಹೀಗೆ ಹುಟ್ಟಿದ್ದೇ ಹಿಂದೂ-ಅರಾಬಿಕ್ ನಂಬರ್ಸ್.

ಆ ದಿನಗಳದಲ್ಲಿ ಧಾನ್ಯದ ವಹಿವಾಟು ಅತ್ಯಂತ ಪ್ರಮುಖವಾಗಿತ್ತು. ಬಹುಷಹಃ ಧಾನ್ಯ ತುಂಬಲು ಬಳಸಿದ ಕುಡಿಕೆಗೂ ಹಾಗೂ ಧಾನ್ಯ ರಕ್ಷಿಸಿಡಲು (ಹಾಗೂ ಸಾಗಿಸಲು) ಬಳಸುತ್ತಿದ್ದ ಬೃಹತ್ ಗಾತ್ರದ ಮಡಿಕೆಗೂ (ಗಡಿಗೆ ಅನ್ನಬಹುದು) ಅನುಪಾತ ೧೦ ಇದ್ದಿರಬಹುದು. ಈ ಅನುಪಾತ ಒಬ್ಬ ಕುಂಬಾರ ದೊಡ್ಡಗಾತ್ರದ ಮಡಿಕೆ ಮಾಡಲು ಇದ್ದ ಅಡೆತಡೆಗಳಿಂದ ಆದದ್ದಿರಬಹುದು. ಈ ರೀತಿ ದಶಮಾಂಶ ಪದ್ದತಿ ಆಕಸ್ಮಿಕವಾಗಿ ಉಗಮವಾಗಿರಬಹುದು. ಆದರೆ ಮಡಿಕೆ ಕುಡಿಕೆಗಳಲ್ಲಿ ಪ್ರಮಾಣೀಕರಣ (standardisation) ಆದದ್ದರ ಪರಿಣಾಮ ಸಾಮಾನ್ಯಜನರ ವ್ಯವಹಾರದಲ್ಲಿ ಹದಿನೈದೆಣಿಕೆಯ ಬದಲು ದಶಮಾಂಶ ಪದ್ದತಿ ಹೆಚ್ಚು ಪ್ರಚಲಿತದಲ್ಲಿತ್ತು ಎಂದೆಣಿಸುತ್ತದೆ. ಹೀಗಾಗಿ ದಶಮಾಂಶ ಪದ್ದತಿ ಹೆಚ್ಚು ಪ್ರಾಮುಖ್ಯತೆ ಪಡೆದಿರಬೇಕು.

ಈ ದಶಮಾಂಶ ಪದ್ಧತಿಗೆ ಚಂದ್ರನಿಂದ ಉಗಮಿಸಿದ ಅಂಖೆಸಂಖ್ಯೆಯನ್ನು ಬರೆಯುವ ಕ್ರಮವನ್ನು  ನಾವು ಹಳೆಯ ಕನ್ನಡ ಲಿಪಿಯಲ್ಲಿ ಕಾಣಲು ಸಾಧ್ಯ. ಚಿತ್ರ -  ೧  ನೋಡಿ.  

                            ಚಿತ್ರ - ೧

ಈ ದಶಮಾಂಶ ಪದ್ದತಿ ಹಾಗೂ ಅಂಖೆ ಸಂಖ್ಯೆಗಳು ಅರೇಬಿಯನ್ನರ ಮೂಲಕ ಯುರೂಪ್ ತಲುಪುವ ವೇಳೆಗೆ ಬಹಳಷ್ಟು ಅಪಭ್ರಂಶ ಗೊಂಡಿತ್ತು. ಬರೆಯಲು ಅಷ್ಟು ಉಪಯುಕ್ತವಾದ ಮಾಧ್ಯಮ ಇಲ್ಲದೆ ಇರುವುದು, ಗುಂಡಗೆ ಬರೆಯಲು ಹಾಗೂ ನಕಲು ಮಾಡಲು ಬರದೇ ಇರುವುದು ಹಾಗೂ ವ್ಯಾಪಾರದಲ್ಲಿ ಗೌಪ್ಯತೆ ಕಾಪಾಡಲು ಹೀಗೆ ವಿವಿಧ ಕಾರಣ ಗಳಿಂದ ಸಂಖ್ಯೆಗಳ ಚಿಹ್ನೆ ಬದಲಾಗಿದೆ.

ಈಗಲೂ ನಾವು ಕನ್ನಡದ ೦,೧,೨ ಮೂಲದಂತೆಯೇ ಬರೆಯುತ್ತೇವೆ. ದ್ರಾವಿಡ ಭಾಷೆಗಳೆಂದು ಗುಂಪು ಮಾಡಿರುವ ತಮಿಳಿನಲ್ಲಿ, ಈ ಸಂಕೇತಗಳು ವಿಭಿನ್ನವಾಗಿದೆ. ಈ ರೀತಿ ಕನ್ನಡದಲ್ಲಿ ಮೂಲವನ್ನು ಯಥಾವತ್ತಾಗಿ ಉಳಿಸಿರುವುದರಿಂದ, ಕನ್ನಡ ಭಾರತದಲ್ಲಿ ಪ್ರಚಲಿತದಲ್ಲಿದ್ದ ಬಹಳ ಹಳೆಯ ಭಾಷೆಗಳಲ್ಲಿ ಒಂದು ಎನ್ನುವುದು ಸಾಬೀತಾಗುತ್ತದೆ. ಹಾಗೆ ಕನ್ನಡ ನಾಡು,  ಚಂದ್ರನ ಸಂಖ್ಯೆಗಳನ್ನು ದಶಮಾಂಶ ಪದ್ಧತಿಗೆ ಅಳವಡಿಸಿ ಚಾಲ್ತಿಗೆ ತಂದ ಮೊದಲನೆಯ ಪ್ರಾಂತ್ಯವಿರಬಹುದಾ ಅನ್ನುವ ಪ್ರಶ್ನೆಗೂ ಎಡೆಮಾಡುಕೊಡಿತ್ತದೆ.  ಹಾಗೇ, ಭಾರತದ ಭಾಷೆಗಳಿಗೆ ಮೂಲ ಎನ್ನುವ "ಬ್ರಾಹ್ಮಿ" ಹಳೆಗನ್ನಡವೇ ಇರಬಹುದಾ ಅನ್ನುವ ಸಂಶಯ ಮೂಡಿಸುತ್ತದೆ? ಭಾರತದಲ್ಲಿ ಮೌರ್ಯರಕಾಲದ ಶಾಸನಗಳೇ ಅತ್ಯಂತ ಹಳೆಯದಾದ ಬರವಣಿಗೆಯ ಕುರುಹುಗಳಾಗಿದೆ. ಈ ಮೌರ್ಯರ ಬರವಣಿಗೆಗಳಲ್ಲಿ ಕನ್ನಡ ಅಂಕೆಗಳು ಹೇಗಿತ್ತು ಎಂದು ಇತಿಹಾಸಕಾರರು ದಾಖಲಿಸಿರುವುದನ್ನು ಚಿತ್ರ - ೨ರಲ್ಲಿ ಗಮನಿಸಬಹುದು. ಇದರಲ್ಲಿ ೧,೬,೮ ಕನ್ನಡದ ಈಗಿನ ಅಂಕೆಗಳಿಗೆ ಹೊಂದುತ್ತದೆ.


                              ಚಿತ್ರ - ೨
ಹಾಗೇ ಇನ್ನೂಂದು ಸ್ವಾರಸ್ಯಕರವಾದ ಸಂಗತಿ ಇಲ್ಲಿ ತಿಳಿಯುತ್ತದೆ. ಹೆಚ್ಚು ೧ ನ್ನು ಒಂದರ ಮೇಲೊಂದರಂತೆ ಬರೆದು ೨ನ್ನು ಸೂಚಿಸಲಾಗುತ್ತಿತ್ತು ಅನ್ನುವುದು ಅಶೋಕನ ಕಾಲದ ಲಿಪಿಯಲ್ಲಿ ನೋಡಬಹುದು. ಆದರೆ ಕನ್ನಡದ ಎರಡು ಹಾಗಿಲ್ಲ. ಅದು ೧ನ್ನು ಉಲ್ಟಾ ಬರೆದ ರೀತಿಯಲ್ಲಿದೆ. ಏಕೆ ಹೀಗೆ? ಚಂದ್ರನನ್ನು ಬರೆದು ಅದರ ಮೇಲೆ ಒಂದು ಅಡ್ಡ ರೇಖೆ ಎಳೆದು ಅಮಾವಾಸ್ಯೆ ಅಥವಾ ಎಣಿಕೆಯ ಮೂಲ ಗುರುತಿಸಲು ಬಳಸುವುದನ್ನು ನಾನು ಹೇಳಿದ್ದಾಗಿದೆ. ಇದನ್ನು "ಕುಯಿಲು" ಎಂದು ನಮೂದಿಸಿರುವುದನ್ನು ಚಿತ್ರದಲ್ಲಿ ಕಾಣಬಹುದು. ಈಗಲೂ ಟಾರ್ಗೆಟ್ ಗುರುತಿಸಲು ಒಂದು ಸೊನ್ನಗೆ ಉದ್ದ ಹಾಗೂ ಅಡ್ಡ ರೇಖೆ ಹಾಕಿ ಗುರುತಿಸುವುದನ್ನು ಗಮನಿಸಬಹುದು (ಕ್ಯಾಮರಾದಲ್ಲಿ ಹಾಗೂ ಶಸ್ತ್ರಾಸ್ತ್ರಗಳ ಬಳಕೆಯಲ್ಲಿ).  

ಹಾಗೇ ಒಂದು ಚಂದ್ರನನ್ನು ಎರಡು ಭಾಗ ಮಾಡಿದರೆ ಏನಾಗುತ್ತದೆ ಅದು ಅರ್ಧ ಚಂದ್ರ ಅಂದರೆ 1/2. ಹಾಗಾಗಿ ಮೇಲಿನ ಅರ್ಧ ಚಂದ್ರ ಸೂಚಿಸುವ ಭಾಗ ೧ ಹಾಗೂ ಕೆಳಗಿನ ಅರ್ಧ ಚಂದ್ರದ ಭಾಗ 2. ಅಂದರೆ ೧ ರ ಉಲ್ಟಾ ಸ್ವರೂಪ "ಲ/೨". ಎಷ್ಟು ಅರ್ಥ ಪೂರ್ಣವಾಗಿದೆ. ಅಂದರೆ ಕನ್ನಡಿಗರು ಗಣಿತದ ಭಾಗಲಬ್ದ ಸಂಖ್ಯೆ (rational number) ಕಂಡು ಹಿಡಿದಿರಬೇಕು. ಇದು ವೈಙ್ನಾನಿಕ ಪುರಾವೆ ಅಲ್ಲವೇ?

3,6,9 ರ ಕೋನಗಳು ಹೇಗೆ ಒಂದಕ್ಕೊಂದು ಪೂರಕಾಗಿದೆ ಎನ್ನುವುದನ್ನು ಗಮನಿಸಬಹುದು. ಹಾಗೆ 4 ಮತ್ತು 8 ನ್ನು  ಗಮನಿಸಬಹುದು. 10ಕ್ಕೆ ಅರ್ಧವಾದ 5 ನ್ನು ಬರೆಯಲು ಚಂದ್ರನ ಎರಡಾದ ಹೋಳು ಬಳಸಿರುವುದನ್ನು ಕಾಣಬಹುದು. ಇಷ್ಟು ವೈಙ್ನಾನಿಕವಾಗಿ, ತರ್ಕಬದ್ದವಾಗಿ ಚಿಹ್ನೆಗಳನ್ನು ಸಂಶೋಧಿಸಿರುವುದು, ಬರೆಯುವಾಗ ಆಗುವ ದೂಷಗಳಿದ್ದರೂ, ಸಂಖ್ಯೆಯನ್ನು ಸಂಧರ್ಭೂಚಿತವಾಗಿ ತಪ್ಪಿಲ್ಲದಂತೆ ಅರ್ಥೈಸಲು. ಕನ್ನಡದ ಮೂಲ ೪ ಅಪಭ್ರಂಶವಾಗಿರುವುದು ಅಶೋಕನ ಲಿಪಿಯಲ್ಲಿ ಕಾಣುವುದನ್ನು ನೋಡಿದರೆ, ಕನ್ನಡವೇ ಅಂಖ್ಯೆಗಳ ಮೂಲ ಎಂದು ರುಜುವಾಗುತ್ತದೆ. ಉತ್ತರದವರು ಹಾಗೂ ಯುರೋಪಿಯನ್ನರು ಕನ್ನಡದಿಂದ ಎರವಲು ಪಡೆದಿದ್ದಾರೆ ಎಂದೂ ಸಾಬೀತಾಗುತ್ತದೆ, ಏಕೆಂದರೆ ಅಶೋಕನ 4 ಕ್ಕಾಗಲೀ ಅಥವಾ ಯುರೋಪಿನ 4ಕ್ಕಾಗಲೀ ಹಾಗೇ ಬರೆಯುವುದಕ್ಕೆ ಕಾರಣ ಏನು ಎಂದು ಎಲ್ಲೂ ಅರ್ಥ ಸಿಗುವುದಿಲ್ಲ. ಕನ್ನಡದ ಎಲ್ಲಾ ಅಂಖ್ಯೆ ಸಂಖ್ಯಗಳನ್ನು ಅದರ ಉಗಮಕ್ಕೆ ಕಾರಣವನ್ನಿಟ್ಟು ವಿವರಿಸಬಹುದು. ಇಷ್ಟು ಸಾಕಲ್ಲವೇ ಗಣಿತ ಹುಟ್ಟಿದ್ದು ಕನ್ನಡದ ಮಣ್ಣಿನಲ್ಲಿ ಎಂದು ಸಾಬೀತುಮಾಡಲು? ಆದರೆ ಕುತಂತ್ರದ ಯುರೋಪಿಯನ್ನರಿಗೆ ಇದು ಸಾಲುವುದಿಲ್ಲ.

Bakhshali numerals 1.png

           ಚಿತ್ರ ೩  ಭಕ್ಷಲಿ ಎನ್ನುವ (ಈಗಿನ ಪಾಕಿಸ್ತಾನ) ಸ್ಥಳದಲ್ಲಿ ದೊರೆತಿರುವ ಹಳೆಯ (೪-೫ನೆ ಶತಮಾನದೆಂದು ಭಾವಿಸಿರುವ ಗ್ರಂಥದಲ್ಲಿ ನಮೂದಿಸಿರುವ ಸಂಖ್ಯೆಗಳು.

ಇದರ ಬಗ್ಗೆ ಇರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಡಿಯೋ ನೋಡಿ. => (https://youtu.be/pV_gXGTuWxY

ಇದೇ ಯುರೋಪಿಯನ್ನರು ಈಗ ಹಿಂದೂ- ಅರಾಬಿಕ್ ಸಂಖ್ಯೆಗಳು ಬ್ರಾಹ್ಮಿಲಿಪಿಯಿಂದ ಬಂದದ್ದೆಂದು ಪ್ರತಿಪಾದಿಸುತ್ತಿದ್ದಾರೆ ( ಅಶೋಕನ ಬ್ರಾಹ್ಮಿ ಯಲ್ಲಿ ಉಲ್ಲೇಕಿಸಿರುವ ಸಂಖ್ಯೆಗಳು. ಆದರೆ ಅಶೋಕನ "೪" ಕನ್ನಡದ ೪ ರಿಂದ ಅಪಭ್ರಂಶವಾಗಿರುವುದರಿಂದ ಕನ್ನಡದ ೪ಕೇ ಮೂಲ ಎನ್ನಬಹುದು). ಬ್ರಾಹ್ಮಿ ಅಂದರೆ ಬ್ರಾಹ್ಮಣರ ಲಿಪಿ ಎಂದು ಅವರ ಲೆಕ್ಕಾಚಾರ. ಇದಕ್ಕೆ ಅವರು ಕೊಡುವ ಪುರಾವೆ ಏನು ಗೊತ್ತೇ? "ಲಲಿತವಿಸ್ತಾರ" ಎನ್ನುವ ಪುರಾತನವಾದ ಮಾಹೆಯಾನ ಬುದ್ದರ ಗ್ರಂಥದ ಪ್ರಮಾಣ. ಈ ಗ್ರಂಥವನ್ನು ಬ್ರಾಹ್ಮಿಯಿಂದ ಚೀನಾದೇಶದವರ ಭಾಷೆಗೆ ಹಿಂದೆಯೇ ತರ್ಜಿಮೆ ಮಾಡಲಾಗಿದೆ. ಎರಡೂ ಭಾಷೆಗಳಲ್ಲಿ ಅದೇ ವಿಚಾರ ಇರುವುದರಿಂದ, ಪ್ರಸ್ತಾಪಿಸಿರುವ ವಿಚಾರ ಸರಿಯಾದಧ್ದೆಂದು ಪ್ರಮಾಣಿತವಾಗಿದೆ. ಈ ಗ್ರಂಥದಲ್ಲಿ ಹೀಗೆ ಬರೆದಿದೆ. 

"ಸಿದ್ಧಾರ್ಥ ತನ್ನ ಶಿಕ್ಷಣವನ್ನು ಹಾಗೂ ಬ್ರಾಹ್ಮಿ ಮುಂತಾದ ಬರವಣಿಗೆಗಳನ್ನು "ಲಿಪಿಕಾರ" ಎನ್ನುವ ಬ್ರಾಹ್ಮಣನಿಂದ ಹಾಗೂ ದೇವ ವಿದ್ಯಾಸಿಂಹ ಎನ್ನುವವರಿಂದ ಕಲಿತ". 

"ಲಿಪಿ" ಹಾಗೂ "ಲಿಪಿಕಾರ" ಎನ್ನುವ ಪದ ಅಪ್ಪಟ ಕನ್ನಡದ್ದು. (ಶಿಲ್ಪಿ ಪದದಲ್ಲೇ ಲಿಪಿ ಇದೆ,  ಶಿಲೆಯಲ್ಲಿ ಲಿಪಿಸುವನು ಶಿಲ್ಪಿ) . ಲಿಪಿಕಾರ ಎನ್ನುವುದು ಒಂದು ಹೆಸರು ಎಂದು ಯುರೋಪಿಯನ್ನರು ತಪ್ಪು ಭಾವಿಸಿದ್ದಾರೆ. "ಲಿಪಿಕಾರ" ಎನ್ನುವುದು, "ಚಮ್ಮಾರ", "ಕಲಾಕಾರ" ಎನ್ನುವಂತೆ ಒಂದು ಕಸುಬಿನ ಹೆಸರು. ಅಂದರೆ ಬುದ್ಧನಿಗೆ ಬ್ರಾಹ್ಮಿ ಕಲಿಸಿದ್ದು ಒಬ್ಬ  ಬ್ರಾಹ್ಮಣ, ಅದೂ ಒಬ್ಬ ಕನ್ನಡಿಗ. ಅಂದರೆ ಕನ್ನಡ ಬುದ್ದನಿಗಿಂತ ಮೊದಲೇ ಇತ್ತೆಂದಲ್ಲವೇ? ಈ ಬ್ರಾಹ್ಮೀಯ ಮೂಲರೂಪ ಕನ್ನಡವೇ ಆದಂತಾಯಿತಲ್ಲವೇ? ಅಂದರೆ, ಈ ಯುರೋಪಿಯನ್ನರ ವರಸೆಯಂತೆಯೂ, ಕನ್ನಡದ ಅಂಕಿಗಳೇ ಇಂದಿನ ಗಣಿತಕ್ಕೆ ಮೂಲವಾಯಿತೆಂದಲ್ಲವೇ?

ಭಕ್ಷಲಿಯಲ್ಲಿ ಸಿಕ್ಕಿರುವ ಸಾಕ್ಷ್ಯದಂತೆ, ಸೊನ್ನೆಯನ್ನು ದಶಮಾಂಶ ಪದ್ದತಿಯ ಸ್ಥಳಕ್ಕಾಗಿ ಸೊನ್ನೆಯ ಬಳಕೆ ಇದೆ (೧೦,೨೦,೩೦,೪೦ ರಂತೆ), ಸೊನ್ನೆಯ ಜಾಗಕ್ಕೆ ಅಲ್ಲ. ಅದೇ ಗ್ರಂಥದಲ್ಲಿ ರುವಂತೆ ಸೊನ್ನೆ ಉತ್ತರವಾಗಿ ಬರುವ ಸಮಸ್ಯೆಗಳಿಗಿ, ಯಾವುದೇ ಚಿನ್ಹೆ ಬರೆಯದೆ ಖಾಲಿ ಜಾಗ ಬರೆಯಲಾಗಿದೆ. ಅಂದರೆ ನಾವು ಈಗ ಹೇಳುವು ಸೊನ್ನೆ "೦" ಯಂತೆ ಅದು ಬಳಕೆಯಲ್ಲಿ ಇರಲಿಲ್ಲ. ಅದು "ಕುಂಭ" ಅಂದರೆ ದಶಮಾಂಶ ಪದ್ದತಿಯ ಸ್ಥಳ ಸೂಚಕವಾಗಿತ್ತು.

ಇಡೀ ಭಾರತಖಂಡವನ್ನು ತಿರುಗಿ ಎಲ್ಲಾ ವಿದ್ವಾಂಸರೊಡನೆ ಚರ್ಚೆ ಹಾಗೂ ಮಂಥನ ಮಾಡಿದ ಆದಿ ಶಂಕರಾಚಾರ್ಯರು, ಕರ್ನಾಟಕದ, ಶೃಂಗೇರಿಯಲ್ಲಿಯೇ ಶಾರದೆ (ಸರಸ್ವತಿ/ವಾಗ್ದೇವಿ/ಬ್ರಾಹ್ಮಿ) ಮಂದಿರ ನಿರ್ಮಿಸಿದ್ದು ಕಾಕತಾಳೀಯವೇ? ಹಾಗಲ್ಲದೇ ಶಿವನ ಆರಾಧಕರಾದ ಶಂಕರರು ಕರ್ನಾಟಕದಲ್ಲಿ ಶಿವನ ಬದಲು ಶಾರದಾ ಪೀಠ ಸ್ಥಾಪಿಸಲು ಬಲವಾದ ಯಾವ ಕಾರಣವೂ ಸಿಗುವುದಿಲ್ಲ.. ಕರ್ನಾಟಕ ಬ್ರಾಹ್ಮಿಯ ತವರು. ಹಾಗಾಗಿ ಶಾರದೆ ಅಥವಾ ಬ್ರಾಹ್ಮೀ ದೇವಿಯ ಮಂದಿರ ಇಲ್ಲಿದೆ. ಬ್ರಾಹ್ಮೀ ಉತ್ತರದ್ದಾಗಿದ್ದರೆ, ಕಾಶ್ಮೀರದಲ್ಲಿ ಸರ್ವಙ್ನ ಪೀಠ ಅಲಂಕರಿಸಿದ ಶಂಕರರು, ಕಾಶ್ಮೀರದಲ್ಲಿಯೇ ಶಾರದಾ ಪೀಠವನ್ನು ಸ್ಥಾಪಿಸುತ್ತಿದ್ದರು. ಇಲ್ಲಾ ತಮ್ಮ ತವರಾದ ಕೇರಳದಲ್ಲಿ ಅಥವಾ ವಿದ್ಯೆಗೆ ಹೆಸರುವಾಸಿಯಾಗಿದ್ದರು ಕಂಚಿಯಲ್ಲಿ ಶಾರದಾಪೀಠ ಸ್ಥಾಪಿಸಿರುತ್ತಿದ್ದರು. ಶೃಂಗೇರಿಯ ಈಶ್ವರನ ಹೆಸರು, "ವಿದ್ಯಾ" ಶಂಕರ. ಈಶ್ವರನಿಗೂ ವಿದ್ಯೆಯನಂಟು.  ಶಂಕರರ ೮ನೆಯ ಶತಮಾನದಲ್ಲಿಯೇ, ಕರ್ನಾಟಕ ವಿದ್ಯೆಗೆ ತವರು ಎಂದು ಗುರುತಿಸಿಕೊಂಡಿರಬೇಕು. 

ಈ ಯುರೋಪಿಯನ್ನರಿಗೆ ಶೂನ್ಯ ಮತ್ತು ಸೊನ್ನೆಯ ಭೇದ ಗೊತ್ತಿಲ್ಲ. ಇವೆರಡೂ ಬೇರೆ ಬೇರೆಯವು. ಭಾರತೀಯರು ಶೂನ್ಯಕ್ಕೆ ಒಂದು ಸೊನ್ನೆ ಬಳಸಿಲ್ಲ (ಚಿತ್ರದ ಕುಯಿಲು ನೋಡಿ). ಶೂನ್ಯದ ಕಡೆಗೆ ಅಂದರೆ ಅಮಾವಾಸ್ಯೆಯ ಕಡೆಗೆ ಅಂದರೆ ಮರಣದ ಕಡೆಗೆ ಎಂದರ್ಥ. ಇದಕ್ಕೆ ಪೂರ್ಣ ಚಂದ್ರ ನ ಚಿಹ್ನೆ ಬಳಸುವ ಇರಾದೆ ತಪ್ಪಾಗುತ್ತದೆ. ಆದರೆ, ಹತ್ತರಿಂದ ಇಪ್ಪತ್ತಕ್ಕೆ ಏರುವ ಪರಿ, ವ್ಯಾವಾಪರದಲ್ಲಿ ಉನ್ನತಿಯನ್ನು ಹೊಂದಿದಂತೆ. ಆದ್ದರಿಂದ ಪೂರ್ಣಚಂದ್ರನ ಸೇರಿಸಿ ೧೦ ಬರೆದದ್ದು. ೧೦ ಒಂದು ಪೂರ್ಣಕುಂಭ ತುಂಬಿದಂತೆ. ಆದ್ದರಿಂದ ಅದರಲ್ಲಿ ಸೊನ್ನೆ ಇರುವುದು.

ಈ ನವ ಗಣಿತದ ಮೂಲ ಭಾರತ ಎಂದು ಇಂದು ಪ್ರಪಂಚ ಒಪ್ಪಿದೆ. ಆದರೆ ಇದು ಬಹುಷಃ ಭಾರತದಲ್ಲಿ ಶುರುವಾದದ್ದು ನಮ್ಮ ಕನ್ನಡನಾಡಿನಲ್ಲಿ . ಇದು ನಿಜವಾ ಎನ್ನುವುದನ್ನು ಇತಿಹಾಸಕಾರರು ಸಂಶೋಧಿಸಿ ಪುರಾವೆ ನೀಡಬೇಕು. ಇದು ನಿಜವಾದರೆ, ಕನ್ನಡಕ್ಕೆ ಇನ್ನೊಂದು ಗರಿಮೆ. ಹೆಚ್ಚು ಙ್ನಾನಪೀಠ ಪ್ರಶಸ್ತಿ ಪಡೆದ ಕನ್ನಡಕ್ಕೆ, ಭಾರತದ ಭಾಷೆಗಳಲ್ಲಿ ಇನ್ನೂ ಹೆಚ್ಚಿನ ತೂಕ ಬಂದಂತೆ. ಸಂಭಂದಿಸಿದವರು ಈಗಲಾದರೂ ಇದರ ಬಗ್ಗೆ ಗಮನ ಹರಿಸಿಯಾರೇ?



ಹಾಸನದ ಹೆಚ್ ಕೆ ಎಸ್ ಇಂಟರ್ನ್ಯಾಷನಲ್ ಶಾಲೆಯ ತರಗತಿಯ ಗೋಡೆಯ ಮೇಲೆ ಬರೆದಿರುವ ಚಿತ್ರ.

- ರಾಮಪ್ರಸಾದ್ ಸೋಗಾಲ್

We now know, the numbers we use are coined as "Hindu Arabic" numerals. Now it is accepted that, "0" and decimal system started in India (after lot of fight). But this is half truth. Nobody tells, how did the numbers really evolved? Why we write 0,1,2,3,4, 6, 9 in that way and not in some other forms. Syria had cuneiform, Egypt had so many symbols, in fact one symbol for each and every word. Even Chinese & Japanese languages have strange looking symbolic notation. But the number design look simple (with very less strokes) and doesn't get influenced from any of these popular symbols. What is the reason for this exclusivity and how did our ancestors invented them?

The History of present numbers can be deduced, if we see the way numbers are written in "Kananda language". In Kannada we have one book called "siribhoovalaya". It is composed by kumudendu muni. The beauty of this book is, it is written using only numbers. Yes, The language of the book is numbers and It is called "Anka Kavya", meaning " Numerical Poetry". It is probably the only book in world written this way. There is lot of controversy about content, difficulty, purpose of writing the book in this way, claims in the book/about the book, date of writing etc. In that book, one format of writing Kannada numbers is given. See the picture, attached. It shows one of the ancient way of writing Kannada numbers. The picture also shows the current way of writing the numbers in Kannada for comparison (second line). Infact, there are no major differences. The second picture shows, how the numbers evolved from Ashokan time (3rd BC) to present day (21st century) under various rulers ruling Karnataka. The symbols are extracted from epigraphic studies and published. So there is sufficient proof and background.

What is interesting is, if you carefully observe the ancient (or original) Kannada numerals, you can make out that, they are derived from moon. People observed moon and started to record. What started as counting and recording moon's progress from no moon day to full moon-day, became a counting system. So, no moon day, became a full circle with a crossed line. The crossing of full moon became no moon (so natural). Padya (the first day after no-moon day) became one semi circle (just like the way it is visible in sky). second day became 2 semi-circle lines written one above other, to indicates increased thickness. similarly 3, 4 etc. The way moon grew its thickness to become full circle, became a natural writing expression. Note, the 15th count became a full circle to indicate, the full moon. So, they established a counting pattern up to 15, which is hexadecimal system (as we know today). Writing semicircle one above the other was tedious, so they started to invent symbols using the semicircle. This is how the larger numbers were replaced. Writing semicircle one above other can be still seen in Ashokan time for 1 to 3. Note, Ashoka used Pali and not kananda. So, probably the Kannada numbers were incorporated in many languages by that time itself. Due to poor way of writing or for keeping secrecy, the numbers were altered during trans-migration. But still the original foot print can be seen even to this day. For example, see 4. 4 is squeezing of top 2 quadrants of circle. The symbol became "t" in Ashokan pali. The "t" has become todays 4 (in modern world). You can still see the t part in 4. Kannada 3 is todays "3" (in modern world). Look at 3,6,9. All uses same symbol but with changed angles. Same is the case for 0,5,10 etc. So, the sequencing jumps were used to reduce symbols. Look at 0. It is 0 with a central line. The line divides the circle in to two. The first part became 1, the second part became 2. This is how, 1 and 2 are invented in Kannada. Even today, this is how they are written in Kannada. The reduced symbols is easy to remember and learn. The pattern helps in teaching and eliminating confusions.

The Indian traders took the numbers to Arabia and it spread from all over. As recording things was laborious, and bulk of writing was numbers, simplicity of Kannada symbols attracted world attention and it was adopted immediately. It was just too economical to use the symbols for writers (it reduced their effort significantly). As the "copiers" did not know original meaning or how the symbols were invented, they did not maintain order while altering the symbols.
Originally numbers were hexadecimal. The full moon "0" was representing 15. "0" was called "Poorna Ankha". Poorna means, "full" and "Ankha" means number. Full moon is still called "Poorna chandra" in Kannada. In olden days Rice/Barley/cotton and oil were main commodity items. Rice could be ferried in sacks and oil was ferried using pots. The sacks/pots were handled by manual laborers. It means, these sacks/pots should be handled by both men and women, young and old etc of the population. So, an average size was derived. The big sacks and pots were used for transporting and storage. But smaller quantity was required for daily usage or for barter. The small and big size were invented for convenience. It so happened that, the ratio between small vessel to big vessel happed to be 1:10. I think, it got fixed, when they standardized the sack size/pot size. The users were reluctant to change the small vessel size and sack size was limited due to standardization. Later they adopted numbers to record. When they adopted to record, the hexadecimal had to be truncated to decimal system. The 10 became "Poorna Kumbha". Meaning full Pot. In rural areas, if you observe the way, they measure traditionally, they count like this. They count up to 9 and say "Poorna Kumbha" for 10. They start the process again. The number of "Poorna Kumbhs" becomes the value to settle payment. So, "Poorna Ankh", 0 was used for "Poorna Kumbha". This is how full moon symbol, "0" got incorporated in "10".

Also note, Bhakshali manuscript, the fragile document, zero does not yet feature as a number in its own right, but as a placeholder in a number system, just as the “0” in “101” indicates no tens. Bhakshali script, features a problem to which the answer is zero, but here the answer is left blank. This clearly indicate, blank or absence of number was zero. And zero was kumbh or the place holder (like in 10, 20,30 etc).

"0" as we know, did not represent the number "zeero", originally. Reference to "Shoonya" in Upanishads is quoted to prove Indians invented "zero". This is "Half Truth". It is true that, "shoonya (nothing)" and "anantha (infinite)" were invented in Vedas. Both shoonya and anatha were invented to describe god. Ishopanishath gives popular sloka, "poornamada, poornamidam...." shanti mantra. It equates "Fullness" with "Shoonya", to indicate everything comes out from creator and everything should finally merge with creator. It was an argument to propose, Merging with creator is the end truth, Life is an opportunity and one should use it to, meet the end objective in less cycles of birth and death. This is "philosophical". The shloka links "fullness" with "shoonya". Since "Poorna" was represented by "0", some body used it in writing, while interpreting this shloka/upanishad/idea. Since counting was from 1 to "Poorna Kumbha" and the cycle was repeated, starting or end point becomes the same. So, "0" started to represent beginning in some cultures. This is how, symbol "0" became todays zero.

Since the numbers are more or less used in original form only in Kannada, we can trace the full history of numbers. We can say that, probably numerals as we know today were invented in "Karnataka". Due to controversy surrounding "Siribhoovalaya" and establishing a date for it, it is still not possible to establish the antiquity and claim the "due credit". Since, no other written epigraphical proof of kannada before Ashokan period is found, it is hard to give the required proof.

3 comments:

  1. What I understand is man resorted, of course gradually and in due course of time, to decimal system because it was easier for him to account for the quantity.Further, this decimal system he took the help of his fingers of hand which were incidentally ten (both the hands) in number. This system helped him a lot to further develop number system faster and more rationally.

    ReplyDelete
  2. Not only numbers but also alphabets.
    Kannada alphabets are picto-graphic in origin and seems to be created by the inspiration from Nature, Animal, Human beings and their items of day to day usage or observation.
    There is definitely involvement of greater degree of intelligent logic in the formation of the alphabets and Ottaksharas.

    Most Kannada alphabets are symmetric and curvy, thus making Kannada as one of the most beautiful writing system.
    Rightly called as Queen of the Writing world by Vinobha Bhave.

    To add more to the list here are some more.

    ಅ - Aa/Uh (Resembles mouth open / Perhaps the first Smiley in the world)
    ಆ - AAa/Aah (Mouth wide open/ Longer Aa)
    ಇ - Ili (Rat)
    ಉ - Ogi (Smoke) Motion of smoke in air
    ಊ - Ooga (Vapours) Motion of hot vapors
    ಏ - Edi (Crab) - Mostly Fiddler Crab, with its bigger sting placed over itself
    ಒ - Onti (Camel) Camel in sitting posture
    ಕ - Kamandala
    ಖ - Khadga (Sword) - Handle of the sword
    ಗ - Gavi (Cave) Similar to Cave entrance
    ಟ - Tagara (Ram) Head of Ram
    ಠ - Thakka (Theif) ( A person put in cell/jail)
    ತ - Takkadi (Balance)
    ಥ - Thadi ( Aane Thadi - Decorative Cloth on back of domesticated animals like Boar/Elephant during rituals)
    ನ - Naga (Snake)
    ಬ - BaathkoLi (Duck)
    ಯ - Yaga/Yagna (Flames During Yagna Ritual)
    ರ - RA / Ravi/ nesaRA (Sun) (Ra - Sun in Egyptian)
    ಲ - La (Old Kannada word for Man) - Hands of a Man with both hands up and one folded inwards as if in gesture to call

    Similarly, need to find the pictures behind the other alphabets.

    Origin of Kannada Ottaksharas
    Kannada ottaksharas are formed in four ways
    1. In most cases the upper sleeping stoke is removed.
    ಕ್ಕ(KKa), ಗ್ಗ (GGa), ಪ್ಪಾ(PPa), ವ್ವ (VVa), ಸ್ಸ (SSa)
    2. Placing smaller same alphabet under itself
    ಣ್ಣ (NNa), ಟ್ಟ (TTa), ಬ್ಬ (BBa)
    3. in some cases incomplete/half letters or section of a letters are used.
    ಕ್ರ - Ra kar From ರ -> Cut the alphabet ರ and use the lower half
    ತ್ತ - Tta from ತ -> Cut the alphabet and use the lower portion along with the loop and elongate it.
    ನ್ನ - Nna from ನ -> Cut the alphabet ನ , the lower incomplete is already used for ಸ್ಸ (SS) and the upper sleeping stroke resembles ತ್ತ (Tta), so use the upper stroke with its tail
    4. Irregular Ottaksharas
    ಮ್ಮ- MMa from ಮ -> Rotate the lower half part of ಮ without tail to differentiate from VVa Ottaksharas
    ಲ್ಲ - ಲ Ottaksharas is inverted ಲ, as it can be mistaken for ಗ್ಗ, add another inverted ಲ to get ಲ್ಲ. Just adding incomplete ಲ under ಲ can be mistaken for Ra Kar as in ಕ್ರ.

    Kannada - Devanagari similarities
    ಉ - rotate right to get Devanagari उ
    Rotate Kannada Om to get Devanagari um
    ಓಂ -> उं (rotated Kannada ಓಂ) In Devanagari it's ॐ / Oom with Dirgha Oo/Longer Oo - but pronounced as Om/ओम
    ಖ - ख (Kannada ಖ resembles more with Sword handle - Khadga)
    ಹ - ाः (Aha - Visargas rotated ಹ/ha is changed to two dots in Devanagari)
    ಲ - ल (Same as inverted Kannada oattakshara for L - LL/ಲ್ಲ )
    - र
    ಯ್ಯ - य (Same as the Kannada oattakshara for ya/य)

    Kannada - English Similarities
    ಅ - A (Invert and Flattened the curves)
    ಬ - B ( Rotate, add join open ends with a line and Flattened the curves)
    ಇ - E (Rotate Left and Flattened the curves)
    ಗ - G (Rotated Kannada ಗ/Ga)
    ಹ - H (Rotated Kannada ಹ with Loop Flattened to lines)
    ಖ - Khadga (Handle of sword), rotate it 45 degrees and add a line before to get K
    ಲ - L (Flatten and shorten the lines)
    ನ - N ( Flatten the curves)
    ಉ - O (Closed Half of Kannada ಉ/o)
    ಉ - U (Open Half of Kannada ಉ/Oo)
    ತ - T (Flattened the curves)
    ವ - W (Flattened the curves)

    ReplyDelete